ನಮ್ಮ ಸಂಬಂಧಿಕರೊಬ್ಬರ ಹೆರಿಗೆಗೆ ಅಂತ
ದಾವಣಗೆರೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು.
* ಒಳ ರೋಗಿ ಚೀಟಿ ಪಡೆಯಲು ಸಲ್ಲಿಸಬೇಕಾದ ಮೊತ್ತ : ರೂ. 20-00
ಆದರೆ ಅವರು ಪಡೆದಿದ್ದದ್ದು ಮೊತ್ತ : ರೂ. 30-00
ಒಬ್ಬರಿಂದ ರೂ. 10-00 ಅವರ ಜೇಬಿಗೆ (ದಿನಕ್ಕೆ ಕನಿಷ್ಟ 50 ರಿಂದ 100 ಜನರಿಂದ ರೂ. 500 ರಿಂದ 1000 ರೂ ಲಂಚದ ಹಣ ಚೀಟಿ ಬರೆಯುವವನ ಜೇಬಿಗೆ)
* ಮಹಿಳೆಯನ್ನು ಒಳಗೆ ಕರೆದುಕೊಂಡು ಹೋಗಿ ಬಿಟ್ಟು ಬಂದ ಆಯಾ ಕೈಯೊಡ್ಡಿ ನಿಂತದ್ದರ ಪರಿಣಾಮ ಅವರ ಒತ್ತಾಯ ಪೂರ್ವಕವಾಗಿ ಪಡೆದ ಹಣ : ರೂ. 20-00
* ಗೇಟಿನಲ್ಲಿ ನಿಂತಿದ್ದ ಆಯಾಗೆ ರೂ. 40-00
ಹೆರಿಗೆಯಾದ ನಂತರ (ಆ ಮಗು ಯಾವುದು ಅಂತ ಮುಂದಿಟ್ಟುಕೊಂಡು) ಅದನ್ನು ಹೇಳಲು ಅದೇ ಆಸ್ಪತ್ರೆಯ ಸ್ಟಾಫ್ ನರ್ಸ್ ಗಳಿಗೆ ರೂ. : 200-00 (ದಿನವೊಂದಕ್ಕೆ 50 ರಿಂದ 80 ಮಕ್ಕಳು ಹುಟ್ಟುತ್ತಾರೆ, ಅಂದರೆ ದಿನಕ್ಕೆ 10 ಸಾವಿರದಿಂದ 20 ಸಾವಿರ ಹಣ ಸ್ಟಾಫ್ ನರ್ಸ್ಗಳಿಗೆ )ಅವರ ಮನೆಗಳಲ್ಲಿ ಅವರ ಗಂಡ ಮಕ್ಕಳುಗಳಿಗೆ ಜೀವನೋಪಾಯಕ್ಕೆ ಅಂತ ಆಗ ತಾನೇ ಕಣ್ಣು ಬಿಟ್ಟ ಮಗುವಿನ ಹೆಸರಿನ ಮೇಲೆ ಬಡವರು ಎನ್ನದೇ ಭಿಕ್ಷೆ ಬೇಡಿ ತಮ್ಮ ಬ್ಯಾಗ್ ಗಳಲ್ಲಿ ಭದ್ರವಾಗಿರಿಸಿಕೊಳ್ಳುವುದು ಅವರ ದಿನದಿತ್ಯದ ಕರ್ತವ್ಯ.
* ಬಾಣಂತಿ ಮತ್ತು ಮಗುವನ್ನು ವಾರ್ಡ್ ಗೆ ತಂದು ಬಿಡಲು ಆಯಾಗೆ ರೂ. 50-00
* ಬಾಣಂತಿ ಮಗುವನ್ನು ಪದೇ ಪದೇ ವಿಚಾರಿಸಿದ್ದ ಪರಿಣಾಮ ಅವರ ಬೆಲೆ ರೂ. : 50 ರೂ ನಂತೆ 5 ಬಾರಿ ಒಟ್ಟು 250-00
ಬಾಣಂತಿ ಮಗುವಿನ ಡಿಸ್ಚಾರ್ಜ್ ವೇಳೆ ಕೈಯೊಡ್ಡಿ ನಿಂತಿದ್ದ ಆಸ್ಪತ್ರೆಯ ವಾರ್ಡ್ ಸಿಬ್ಬಂದಿಗೆ ರೂ. 100
* ಜನನ ಪ್ರಮಾಣ ಪತ್ರ ಕೊಡುವ ವ್ಯಕ್ತಿ ಒಂದು ತಿಂಗಳು ಅಲೆದಾಡಿಸಿ, ನಾನು ಹಣ ಬಿಚ್ಚದೇ ಇದ್ದಾಗ ಕೊನೆಗೆ ರೂ. 5-00 ರೂ ಹೆಚ್ಚಿಗೆ ಪಡೆದುಕೊಂಡು ಅಲ್ಲೂ ತನ್ನ ಭ್ರಷ್ಟಾಚಾರಕ್ಕೆ ನಿಷ್ಟನಾಗಿ ತನ್ನ ಕರ್ತವ್ಯ ನಿರ್ವಹಿಸಿದ.
* ಮಗುವಿಗೆ ಲಸಿಕೆ ಹಾಕಿಸುವ ಸಲುವಾಗಿ ಹೊರಗಿನಿಂದ ಲಸಿಕೆ ತರಿಸಿ ಲಸಿಕೆ ಕೊಡಿಸಲಾಯಿತು.
* ಮಡಿಲು ಯೋಜನೆಯ ಕಿಟ್ ಗಳ ಪತ್ತೆಯೇ ಇರಲಿಲ್ಲ.
ರಾಜು ವಿನಯ್ ದಾವಣಗೆರೆ

ಇವರಿಗೆಲ್ಲಾ ಏನಾಗಿದೆ. ಸರ್ಕಾರ ಸಂಬಳ ಕೊಡುವುದಿಲ್ಲವೇ?
ಹೀಗೇ ಬಡವರ ಹಣಕ್ಕೂ ಕೈ ಯೊಡ್ಡುತ್ತಾರೆ ಎಂದರೆ ಅವರುಗಳಿಗೆ ಮನಸ್ಸಾಕ್ಷಿಯೇ ಇಲ್ಲವೇನೂ?
ಯಾವುದೇ ಸರ್ಕಾರಿ ಉದ್ಯೋಗ ದಲ್ಲಿರುವ ಒಂದೇ ಒಂದು ಬಾರಿ ಲಂಚ ಪಡೆದಿರುವ ಒಬ್ಬ ನೌಕರ ತಾನೂ ಜೀವನದಲ್ಲಿ ಏನೇ ಗಳಿಸಿದ್ದರೂ ಅದು ಬೇರೆಯವರ ಹಣ ಅನ್ನೋದು ಅವರಿಗೆ ತಿಳಿಯುವುದಿಲ್ಲವೇ?
* ಮನೆಗಳನ್ನು ಕಟ್ಟಿಸಿಕೊಂಡು, ಮಕ್ಕಳಿಗೆ ಮದುವೆ ಮಾಡಿ, ತಾವೇನೋ ಸಾಧಿಸಿದ್ದೇವೆ ಅಂತ ಬೀಗುವ ಇಂತಹ ಲಂಚ ಬಾಕ ಜನ ಅವರು ವಾಸ ಮಾಡುವ ಮನೆಯ ಪ್ರತಿ ಕಲ್ಲು ಮಣ್ಣು ಗಳಲ್ಲೂ ಬೇರೆಯವರ ಋಣ ಇರುವುದು ಅವರಿಗೆ ತಿಳಿಯುವುದಿಲ್ಲವೇನೂ?
ತಮ್ಮ ಮಕ್ಕಳ ಮದುವೆಗೆ ಅದ್ದೂರಿಯಾಗಿ ಖರ್ಚು ಮಾಡುವ ಹಣದಲ್ಲಿ ಬೇರೆಯವರ ಬಡವರಿಂದ ಕೈಯೊಡ್ಡಿ ಪಡೆದ ಭಿಕ್ಷೆಯ ಹಣ ವೆಂಬುದು ಅವರ ಮನಸ್ಸಾಕ್ಷಿಗೆ ತಿಳಿಯುವುದಿಲ್ಲವೇ ?
ಸರ್ಕಾರ ಕೊಡುವ ಸಂಬಳ, ಸವಲತ್ತುಗಳನ್ನು ಬಳಸಿಕೊಂಡು ಲಂಚ ಪಡೆಯದೇ ತನ್ನ ಕುಟುಂಬವನ್ನು ಶುದ್ಧ ಹಸ್ತದಿಂದ ಸಲಹಲು ಸಾಧ್ಯವಿಲ್ಲವೇ?ಈ ಒಂದು ವಿಚಾರವನ್ನು ಪ್ರತಿಯೊಬ್ಬ ಸರ್ಕಾರಿ ನೌಕರ ಮನಗಂಡರೆ,
ನಮ್ಮ ರಾಜ್ಯ, ನಮ್ಮ ದೇಶ ಭ್ರಷ್ಟಾಚಾರ ಮುಕ್ತವಾಗಿಬಿಡುತ್ತದೆ.
ಅದನ್ನು ನಮ್ಮ ಸರ್ಕಾರಿ ನೌಕರರೇ ನಿರ್ಧಾರ ಮಾಡಬೇಕುರಾಜು ವಿನಯ್ ದಾವಣಗೆರೆ
No comments:
Post a Comment